ವಿಷ್ಣುಕಾಂತಿ -
	ಕನ್‍ವಾಲುಲೇಸೀ ಕುಟುಂಬದ ಎವಾಲ್ಯುಲಸ್ ಆಲ್ಸಿನಾಯಿಡಿಸ್ ಎಂಬ ಪ್ರಭೇದಕ್ಕೆ ಸೇರಿದ, ನೆಲದ ಮೇಲೆ ಹರಡಿ ಬೆಳೆಯುವ ಒಂದು ಬಹು ವಾರ್ಷಿಕ ಸಸ್ಯ. ಇದರಲ್ಲಿ ಹೂಗಳು ಬೆಳಗ್ಗೆ ಅರಳಿ ಮಧ್ಯಾಹ್ನದ ಹೊತ್ತಿಗೆ ಮುದುಡಿ, ಕಾಂತಿ ಕಳೆದು ಕೊಳ್ಳುತ್ತವೆ. ಎಲೆ ಮತ್ತು ಕಾಂಡಗಳನ್ನು ಮೇಲೆ ಸೂಕ್ಷ್ಮ ರೋಮಗಳು ಆವರಿಸಿರುತ್ತವೆ. ಎಲೆಗೆ ತೊಟ್ಟಿದೆ. ಹೂಗೊಂಚಲಿನಲ್ಲಿ 1-3 ಹೂಗಳಿರು ವುವು. ಸೈಮ ರಚನೆಯಲ್ಲಿವೆ. ಪುಷ್ಪಪಾತ್ರೆಯ ಎಸಳುಗಳು ಮೊಟ್ಟೆಯಂತಿವೆ, ಉದ್ದ 0.3 ಸೆಂಮೀ. ಐದು ದಳಗಳಿವೆ. ಪ್ರತಿಯೊಂದರ ಉದ್ದ 0.6 ಸೆಂಮೀ. ಎಲ್ಲ ದಳಗಳೂ ಕೂಡಿಕೊಂಡು ಆಲಿಕೆ ಆಕಾರ ಪಡೆಯುತ್ತವೆ. ಹೂವಿನ ಹೆಚ್ಚು ಭಾಗ ಎರಡು ಶಲಾಕಾಶಯಗಳಿಂದಾಗಿದೆ. ಅಂಡಾಶಯ ಉಚ್ಚ ಸ್ಥಿತಿಯಲ್ಲಿರುವುದು. ಇದರಲ್ಲಿ 2 ಶಲಾಕೆಗಳಿವೆ. ಶಲಾಕಾಗ್ರ ತುದಿಯಲ್ಲಿದೆ. ಹೂಗಳು ನೀಲಿ ಅಥವಾ ಬಿಳಿ ಬಣ್ಣದವು. ಸಸ್ಯದ ಯಾವುದೇ ಭಾಗದ ರುಚಿ ಕಹಿ.
	ಉಪಯೋಗ: ಜ್ವರಹಾರಿಯಾಗಿ, ಜಂತು ಹುಳುಗಳ ನಿವಾರಕವಾಗಿ ಎಲೆಗಳ ಬಳಕೆ ಉಂಟು.
	(ಟಿ.ಎಮ್.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ